Saturday, 23 December 2017

IMPORTACE OF MAASAS IN KANNADA CALENDER

IMPORTANCE OF  DHANURMAASA:
🕉 *ಧನುರ್ಮಾಸ ಆರಂಭ 16-12-2017 ಮಕರಸಂಕ್ರಾಂತಿಯ ವರೆಗೆ ಮೂರು ರಂಗ ದರ್ಶನಕ್ಕೆಪ್ರಶಸ್ತ ಸಮಯ ದರ್ಶನಕ್ಕಾಗಿ ದರ್ಶನ ಮಾಡಿ ಅನುಗ್ರಹ ಪಡೆಯಬಹುದು.* 🕉

ಅದಿ ರಂಗನಾಥ, ಮಧ್ಯ ರಂಗನಾಥ
ಅಂತ್ಯ ರಂಗನಾಥ
ತ್ರಿರಂಗ ದರ್ಶನಂ - TRI RANGA DARSHANAM
ಒಂದೇ ದಿನದಲ್ಲಿ ಮೂರು ಕಡೆ ಬೆಳಿಗ್ಗೆ ಯಿಂದ ಸಂಜೆ ಸೂರ್ಯ ಹಸ್ತದ ಒಳಗೆ
ಎರಡು ದಾರಿಯಲ್ಲಿ ದರ್ಶನ ಪಡೆಯಬಹುದು.

ಒಂದನೆಯ ದಾರಿ. 

ಆಧಿರಂಗ ಶ್ರೀರಂಗಪಟ್ಟಣದಿಂದ
ADI RANGA - SRIRANGPATTNA
ಬನೂರು - BAHNUR 
ಮಳವಳ್ಳಿ - MALAVALI
ಶಿವನ ಸಮುದ್ರ - SHIVANASAMUDRAM
ಮಧ್ಯರಂಗ - MADYARANGA
ಕೊಳ್ಳೇಗಾಲ - KOLLEGAL 
ಯಳಂದೂರು - YALANDUR 
ಚಾಮರಾಜನಗರ - C.R.NAGAR 
ಬೆನಕನಹಳ್ಳಿ - BINAKANAHALLI 
ಡಿಂಬಮ್ - DIMBAM 
ಬನ್ನಾರಿ - BANNARI 
ಸತ್ಯಮಂಗಲ - SATYAMANGALA
ಗೋಪಿಚೆಟ್ಟಿಪಾಳ್ಯ - GOPICHETTIPALAYAM
ಈರೋಡ್ - ERODE
ನಾಮಕಲ್ - NAMAKHAL 
ತೂಟ್ಟಯಮ್ - THOTTAYAM 
ಮುಸಿರಿ - MUSIRI
ಗುಣಶ್ರೀಲಮ್ - GUNASHEELAM 
ತಿರುಚ್ಚಿ ಶ್ರೀರಂಗಂ - TIRCHY SRIRANGAM 
ಅಂತ್ಯರಂಗ - ANTHYA RANGAM

ಎರಡನೆಯ ದಾರಿ.

ಆಧಿರಂಗ ಶ್ರೀರಂಗಪಟ್ಟಣದಿಂದ
ADI RANGA - SRIRANGPATTNA
ಬನೂರು - BAHNUR 
ಮಳವಳ್ಳಿ - MALAVALI
ಶಿವನ ಸಮುದ್ರ - SHIVANASAMUDRAM
ಮಧ್ಯರಂಗ - MADYARANGA
ಕೊಳ್ಳೇಗಾಲ - KOLLEGAL 
ಮಹದೇಶ್ವರಬೆಟ್ಟ - M M HILLS
ಪಾಲರ್ - PALAR
ಮೆಟ್ಟೂರು  - METTUR
ಸೇಲಂ - SELAM
ನಾಮಕಲ್ - NAMAKHAL 
ತೂಟ್ಟಯಮ್ - THOTTAYAM 
ಮುಸಿರಿ - MUSIRI
ಗುಣಶ್ರೀಲಮ್ - GUNASHEELAM 
ತಿರುಚ್ಚಿ ಶ್ರೀರಂಗಂ - TIRCHY SRIRANGAM 
ಅಂತ್ಯರಂಗ - ANTHYA RANGAM

ಕಾವೇರಿ ನದಿಯ ದಡದಲ್ಲಿರುವ ದೇವಸ್ಥಾನಗಳು.

ತ್ರಿರಂಗ ದರ್ಶನದ ದೇವಾಲಯಗಳು

*ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ*

ವಿಷ್ಣು ಭಗವಂತನು ಏಳು ಹೆಡೆಗಳ ಸರ್ಪ ಆದಿಶೇಷನ ಮೇಲೆ ಶಯನಾವಸ್ಥೆಯ ಭಂಗಿಯಲ್ಲಿ ಆರೂಢನಾಗಿ ಭಕ್ತರ ಮನದಲ್ಲಿ ಶ್ರೀರಂಗನಾಥ ಸ್ವಾಮಿಯಾಗಿ ಆಶೀರ್ವದಿಸುತ್ತಾನೆ ಎಂಬುದು ಹಿಂದೂ ಧರ್ಮದ ನಂಬಿಕೆ. ಜಗತ್ಪಾಲಕನಾದ ಶ್ರೀರಂಗನಾಥನಿಗೆ ಮುಡಿಪಾದ ಅದೇಷ್ಟೊ ದೇವಸ್ಥಾನಗಳು ನಮ್ಮ ನಾಡಿನಲ್ಲಿವೆ. ಇವುಗಳಲ್ಲಿ ವಿಶೇಷವಾಗಿವೆ ರಂಗನಾಥನ ತ್ರಿರಂಗ ಕ್ಷೇತ್ರಗಳು. ರಂಗನಾಥನ ಈ ತ್ರಿರಂಗ ಕ್ಷೇತ್ರಗಳು ಆದಿ ರಂಗ, ಮಧ್ಯ ರಂಗ ಹಾಗೂ ಅಂತ್ಯ ರಂಗಗಳೆಂದು ಪ್ರಸಿದ್ಧವಾಗಿದ್ದು ಕಾವೇರಿ ನದಿಯಗುಂಟ ರೂಪಿತವಾದ ಮೂರು ದ್ವೀಪಗಳಲ್ಲಿ ನೆಲೆಸಿವೆ. ಒಂದು ನಂಬಿಕೆಯ ಪ್ರಕಾರ, ಕ್ರಮವಾಗಿ ಈ ಮೂರು ಸ್ಥಳಗಳಲ್ಲಿ ನೆಲೆಸಿರುವ ರಂಗನಾಥನನ್ನು ದರ್ಶಿಸಿದರೆ ಎಲ್ಲ ಪಾಪ-ಕರ್ಮಗಳು ನಾಶ ಹೊಂದಿ ಭಗವಂತನ ಕೃಪೆ ಉಂಟಾಗುತ್ತದೆ ಎನ್ನಲಾಗಿದೆ. ಪ್ರಸ್ತುತ ಲೇಖನವು ಆ ಮೂರು ರಂಗ ಕ್ಷೇತ್ರಗಳು ಯಾವುವು ಹಾಗೂ ಅವೆಲ್ಲೆಲ್ಲಿವೆ ಎಂಬುದರ ಕುರಿತು ತಿಳಿಸುತ್ತದೆ.

ಮೊದಲ  ಅದಿ ರಂಗ ಶ್ರೀರಂಗಪಟ್ಟಣದ ಕರ್ನಾಟಕ  ,

ಶ್ರೀರಂಗಪಟ್ಟಣ: ಮೂರು ರಂಗಗಳ ಪೈಕಿ ಮೊದಲನೇಯ ಆದಿ ರಂಗವೆ ಈ ಕ್ಷೇತ್ರ. 

ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸ್ಥಿತವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಅತಿ ಪ್ರಸಿದ್ಧಿ ಪಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ.

ಶ್ರೀರಂಗಪಟ್ಟಣ: ಮೈಸೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣವು ಬೆಂಗಳೂರಿನಿಂದ 120 ಕಿ.ಮೀಗಳಷ್ಟು ದೂರದಲ್ಲಿದೆ. ಎರಡೂ ನಗರಗಳಿಂದ ಇಲ್ಲಿಗೆ ತೆರಳಲು ರೈಲು ಹಾಗೂ ಬಸ್ಸುಗಳು ಸುಲಲಿತವಾಗಿ ದೊರೆಯುತ್ತವೆ.

ವಿಶೇಷ ಸೂಚನೆ : ಧನುರ್ಮಾಸದಲ್ಲಿ ಬೆಳಿಗ್ಗೆ 5 ಗಂಟೆಗೆ ದರ್ಶನ ವ್ಯವಸ್ಥೆ ಇರುವುದು.

ದರ್ಶನದ ವೇಳೆ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 01.00 ಘಂಟೆ ಹಾಗೂ ಸಂಜೆ 4.00 ಘಂಟೆಯಿಂದ ರಾತ್ರಿ 8.00 ಘಂಟೆಯವರೆಗೆ.

ಎರಡನೆಯ  ಮದ್ಯ ರಂಗ ಶಿವನಸಮುದ್ರ ಕರ್ನಾಟಕ.

ಶಿವನಸಮುದ್ರಂ: ತ್ರಿರಂಗ ಕ್ಷೇತ್ರಗಳ ಎರಡನೇಯ ಕ್ಷೇತ್ರ ಮಧ್ಯ ರಂಗವಾಗಿದ್ದು ಇದು ಶಿವನಸಮುದ್ರಂ ಪಟ್ಟಣದಲ್ಲಿದೆ. 

ಶ್ರೀರಂಗಪಟ್ಟಣದಿಂದ ಮಳುವಳ್ಳಿ ಮಾರ್ಗವಾಗಿ 87 ಕಿ.ಮೀ ಗಳಷ್ಟು ದೂರದಲ್ಲಿ ಈ ಕ್ಷೇತ್ರವನ್ನು ತಲುಪಬಹುದು. 

ಸಾಂಕೇತಿಕವಾಗಿ ಇದು ವಿಷ್ಣುವಿನ ಯವ್ವನಾವಸ್ಥೆಯನ್ನು ಸೂಚಿಸುವುದರಿಂದ ಇಲ್ಲಿರುವ ರಂಗನ ದೇವಸ್ಥಾನವನ್ನು ಮೋಹನರಂಗ ಅಥವಾ ಜಗನ್ಮೋಹನ ರಂಗ ದೇವಸ್ಥಾನ ಎಂತಲೂ ಕರೆಯುತ್ತಾರೆ.

ಕೊನೆಯ ಮೂರನೆ  ಅಂತ್ಯ ರಂಗ ಶ್ರೀರಂಗಂ ತಮಿಳುನಾಡು ,

ಶ್ರೀರಂಗಂ: ತ್ರಿರಂಗಗಳ ಪೈಕಿ ಕೊನೆಯ ಅಥವಾ ಅಂತ್ಯ ರಂಗವು ತಮಿಳು ನಾಡಿನ ಶ್ರೀರಂಗಂನಲ್ಲಿದೆ. ತಿರುಚ್ಚಿಯಿಂದ ಶ್ರೀರಂಗಂಗೆ ಬಸ್ ಸೌಲಭ್ಯವಿದೆ. 

ಚೆನ್ನೈ, ಕನ್ಯಾಕುಮಾರಿ, ಹೈದರಾಬಾದ್, ಬೆಂಗಳೂರು, ಕೋಯಮತ್ತೂರು, ಮೈಸೂರು, ಮಂಗಳುರು, ಕೊಚ್ಚಿ, ರಾಮೇಶ್ವರಂ, ತಂಜಾವೂರು, ಮದುರೈ, ಚಿದಂಬರಮ್, ತೂತುಕುಡಿ, ಕೊಲ್ಲಮ್, ತೆಂಕಸಿ ಮತ್ತು ತಿರುಪತಿಯಿಂದ ಬಸ್ ಸೌಕರ್ಯಗಳು ತಿರುಚ್ಚಿಗೆ ಇವೆ. ಶ್ರೀರಂಗಂನಲ್ಲಿರುವ ಈ ದೇವಾಲಯವು ತ್ರಿರಂಗಗಳ ಪೈಕಿ ಅತಿ ದೊಡ್ಡ ದೇವಾಲಯವಾಗಿರುವುದೂ ಅಲ್ಲದೆ ದೇಶದ ಅತಿ ದೊಡ್ಡ ದೇವಾಲಯಗಳ ಪೈಕಿಯೂ ಒಂದಾಗಿದೆ.

ಧನುರ್ಮಾಸದ ಸಮಯದಲ್ಲಿ ದೇವಾಲಯ ಬೆಳಿಗ್ಗೆ 5ಗಂಟೆಗೆ ದರ್ಶನದ ವ್ಯವಸ್ಥೆಯ ಕಾರಣ ಒಂದೇ ದಿನದಲ್ಲಿ ಮೂರು ರಂಗನಾಥ ಸ್ವಾಮಿ ದರ್ಶನ ಪಡೆಯಬಹುದು.
ವೈಕುಂಠ ಏಕದಶಿಯ ದರ್ಶನ ವಿಶೇಷ.

*****************************************************************************************************
 *ಚೈತ್ರ ಮಾಸದ ಮಹತ್ವ - 1*
ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ. ’ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧ ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.

ನೈಸಗಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ತದ್ವಿರುದ್ಧವಾಗಿ ಡಿಸೆಂಬರ್ ೩೧ ರಂದು ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.

ನಿಸರ್ಗದ ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕಾರಿಯಾಗಿರುತ್ತವೆ. ಆದುದರಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ಜನವರಿ ಒಂದರಂದು ಹೊಸವರ್ಷಾರಂಭವನ್ನು ಮಾಡದೇ, ಯುಗಾದಿ ಪಾಡ್ಯದಂದೇ ಹೊಸವರ್ಷವನ್ನು ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ.

ಐತಿಹಾಸಿಕ ಕಾರಣಗಳು: ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.

ಆಧ್ಯಾತ್ಮಿಕ ಕಾರಣಗಳು : ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.

**********************************************************************************************************

 ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು *ಸೂರ್ಯನ ಜನ್ಮದಿನ*   
ಅಲ್ಲದೇ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ಆಗಿರುವುದರಿಂದ, 

 *ಇದೇ ಫೆಬ್ರವರಿ ೩ ಶುಕ್ರವಾರ ದಂದು ಸೂರ್ಯ ಆರಾಧನೆಯ ರಥಸಪ್ತಮಿ* ದಿನವೆಂದು ಆಚರಿಸಲಾಗುತ್ತದೆ.       ‌                                                                                     ‌                           ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆಯನ್ನು, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಡಿಯಲ್ಲಿದೆ.         ‌   ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿದೆ. ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ. 

‌‌*ರಥಸಪ್ತಮಿ* ದಿವಸ ರೋಗ ನಿವಾರಣೆಯನ್ನು, ದೇಹದಾರ್ಢ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಹೊಂದುತ್ತಾರೆ.     ‌                      ‌     ‌                                                           ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ *ಸೂರ್ಯ ನಮಸ್ಕಾರ*ಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿವೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ.   ‌            ‌   ‌  ‌   ‌   ‌                                           *ರಥಸಪ್ತಮಿ* ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ *ಮಾಘಸ್ನಾನ* ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ.    ‌            ‌   ‌   ‌   ‌   ‌      ‌                                                       ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುವ ಉದ್ದೇಶದಿಂದಲೇ ಬಳಸಲಾಗಿದೆ.            ‌                  ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನು ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತ ಕರ್ಮದಿಂದ ಬಂದಿರುವ ಈ ಖಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾಧನೆ ಮಾಡಲಾಗಿ ರಾಜಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯು ಆದನು. ಅಲ್ಲದೇ ಪಾಂಡವರು ವನವಾಸದ ಅವಧಿಯಲ್ಲಿ ಕೃಷ್ಣನ ಆದೇಶದಂತೆ *ಸೂರ್ಯಾರಾಧನೆ* ಮಾಡಿ ಸೂರ್ಯನಿಂದ ಅಕ್ಷಯ ಪಾತ್ರೆ ಪಡೆದಿದ್ದರು. ಅಲ್ಲದೆ ರಾವಣನನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ *ಆದಿತ್ಯ ಹೃದಯ*ದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕ ಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ಶಿಸೂರ್ಯಶತಕಷಿವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.      ‌                                                       

ಶ್ರೀರಾಮ ಸೂರ್ಯವಂಶದವನಾದರೆ, ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಅಷ್ಟದಿಕ್ಪಾಲಕರಲ್ಲಿ ಯಮ ಸೂರ್ಯನ ಪುತ್ರರಾಗಿದ್ದಾರೆ.                ‌                                        ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಮಾಣಿಕ್ಯದ ಹರಳು ಧರಿಸಲು ಶುಭ ದಿನವಾಗಿದೆ. ಈ ಸೂರ್ಯರಾಧನೆ ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ತ್, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ.

*ರಥ ಸಪ್ತಮಿ*ಯು ಯಾವಾಗಲೂ ಅರುಣುದೋಯ ವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. *ರಥಸಪ್ತಮಿ*ಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು. ಏಳು ಎಕ್ಕೆಯ ಎಲೆಯನ್ನು ತಲೆ, ಹೆಗಲು, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ.
*ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು* -

 ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |

ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ೧||

ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ | 

ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ||೨|                                                    ತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ | 

ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ೩ || 

ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯ ಸಿಂಧು)

*ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿ ತಿಥಿಗೆ ಅರ್ಘ್ಯ* -

ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯ ಜನನೀಯಾದ ಸಪ್ತಮಿ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.



*ಸೂರ್ಯಾರ್ಘ್ಯ ಮಂತ್ರ* -

ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ | 
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ || 
ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.


*ಸಪ್ತಮಿ ಅರ್ಘ್ಯಮಂತ್ರ* -
ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ | 
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ || 
ಎಂದು ಸಪ್ತಮೀತಿಥಿಯ ಕುರಿತು ಅರ್ಘ್ಯ ಕೊಡಬೇಕು.   ‌                                                                   
*ರಥಸಪ್ತಮಿ*ಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.

*ಇದು ರಥಸಪ್ತಮಿ ಮಾತ್ರವಲ್ಲ: ಆರೋಗ್ಯಸಪ್ತಮಿ*

***************************************************************************************************************************************************************************************************** 

Tuesday, 21 March 2017

SAVI NUDIGALU

ಈ ವಿಷಯಗಳನ್ನು ಸಾಧ್ಯವಾದಷ್ಟೂ ಬೇಕಾದವರೊಡನೆ ಹಂಚಿಕೊಳ್ಳುತ್ತಿರಿ.

1.ಸ್ನೇಹಿತರೆ,
ಈ 'ತಾಯಿಯ ತ್ಯಾಗ'ದ
ದೃಷ್ಟಾ೦ತವನ್ನು ಓದಿದ ಮೇಲೆ,
ಅವಳಿಗಾಗಿ ನಿಮ್ಮ ಮುದ್ದಾದ ಮುಖದಲ್ಲಿ ಕಣ್ಣಂಚಿನಿಂದ ಒಂದೆರಡು ಮುತ್ತುಗಳು ನಿಮ್ಮ ಕೆನ್ನೆಗೆ ಜಾರೇ-ಜಾರುತ್ತವೆ.!!!

ಒಂದೂರಿನಲ್ಲಿ ಒಕ್ಕಣ್ಣ
(ಒಂದೇ ಕಣ್ಣು ಇರುವ)😉 ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ 🙇🏻ಮಗುವಿನೊಂದಿಗೆ ವಾಸವಾಗಿದ್ದಳು.
ಪ್ರತಿ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು.

ಹೀಗೆ ಕಾಲಚಕ್ರ ಉರುಳುತಿತ್ತು.
ಮಗು ಬೆಳೆದು ಪ್ರೌಡಾವಸ್ಥೆ ತಲುಪಿತು.ಮಗು ತಾಯಿಯ ಬಳಿ
“ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು?” ಕೇಳಿದಾಗ,

ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.
ಆ ತಾಯಿಗೆ ತನ್ನ ಮಗ
ತಾನು ಪಟ್ಟ ಕಷ್ಟ ಅವನು ಪಡದೇ, ಜೀವನದಲ್ಲಿ ಒಬ್ಬ ಸ್ಥಿತಿವಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು.
ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು.

ಮಗು ಹಠ ಮಾಡಿತೆಂದು ಅವರಿವರ ಬಳಿ ಸಾಲ ಮಾಡಿ ಸೈಕಲ್🚲 ಕೊಡಿಸಿದ್ದೂ ಆಯ್ತು.
ಹೀಗಿರುವಾಗ ಒಂದು ದಿನ ತಾಯಿ ತನ್ನ ಮಗನ ಶಾಲೆಗೆ ತೆರಳಿ ಮಗುವಿನ ವಿಧ್ಯಾಬ್ಯಾಸದ ಕುರಿತು ಶಿಕ್ಷಕರ ಜೊತೆ ಮಾತಾಡಿ ಬಂದಳು. ಸಂಜೆ ಮನೆಗೆ ಬಂದ ಮಗ ಜೋರಾಗಿ ಕಿರುಚಿ ರಂಪಾಟ ಮಾಡಿದ.

ಆ ತಾಯಿ ಮಗನಲ್ಲಿ ಯಾಕೆ ಏನಾಯಿತು ಅಂತ ಕೇಳುವಾಗ
“ಅಮ್ಮಾ ನೀನಿನ್ನು ನನ್ನ ಶಾಲೆಗೆ ಬರಕೂಡದು.ನನ್ನ ಸಹಪಾಠಿ ವಿಧಾರ್ಥಿಗಳೆಲ್ಲಾ ನಿನ್ನ ಒಕ್ಕಣ್ಣು ನೋಡಿ ತಮಾಷೆ ಮಾಡುತ್ತಾರೆ. ಇಂದು ನಿನ್ನಿಂದಾಗಿ ನನಗೆ ತುಂಬಾ ಅವಮಾನವಾಯಿತು.” ಎಂದು   ಹೇಳಿಬಿಟ್ಟ.

ತಾಯಿಗೆ ಮನಸ್ಸೊಳಗೆ ಅತೀವ ನೋವಾದರೂ ತನ್ನ ಮಗುವಿಗೆ ಮುಜುಗರ ಆಗಬಾರದೆಂಬ ಕಾರಣಕ್ಕೆ ಇನ್ನು ಶಾಲೆಗೆ ಬರಲಾರೆ ಎಂದು ಸಮಾದಾನಿಸಿದಳು.

ಮಗು ಬೆಳೆದು ಕಾಲೇಜ್ ಸೇರಿದ.
ಈಗ ತನಗೆ ಬೈಕ್🏍 ಬೇಕೆಂದು ಹಠ ಮಾಡತೊಡಗಿದ.
ಕೈಯಲ್ಲಿ ನೈಯಾಪೈಸೆ ಇಲ್ಲದ ಆ ತಾಯಿ ತನ್ನ ಕತ್ತಿನಲ್ಲಿದ್ದ📿 ಸರವನ್ನೂ ಮಾರಿ ಮಗನಿಗೊಂದು ಬೈಕ್🏍 ತೆಗೆದು ಕೊಟ್ಟಳು.

ಮಗ ಕಾಲೇಜ್ ಮುಗಿಸಿ ಒಂದು ಒಳ್ಳೆಯ  ಕೆಲಸಕ್ಕೆ ಸೇರಿದ.
ಒಳ್ಳೆಯ ಸಂಬಳ ಕೂಡ ಬರುತಿತ್ತು.
ಇನ್ನು ತನ್ನ ಮಗನಿಗೆ ಮದುವೆ ಮಾಡಿಸಿ ತನ್ನ ಕರ್ತವ್ಯದಿಂದ ಮುಕ್ತಿ ಪಡೆಯಬೇಕೆಂದು ಕೊಂಡಳು.

ಅದೇ ರಾತ್ರಿ ಮನೆಗೆ ಬಂದ ಮಗನೊಡನೆ ಈ ವಿಚಾರ ಮಾತಾಡಿದಳು.

ಆಗ ಮಗ ತಾನು ತನ್ನ ಕಂಪನಿಯಲ್ಲೆ ಕೆಲಸ ಮಾಡುವ💃 ಯುವತಿಯೊಬ್ಬಳನ್ನು ಪ್ರೀತಿಸುವುದಾಗಿಯೂ ಅವಳನ್ನೇ ಮದುವೆಯಾಗುವುದಾಗಿಯೂ ಹೇಳಿಬಿಟ್ಟ. 

ಸರಿ ವಯಸ್ಸಿಗೆ ಬಂದ ಮಗನಿಗೆ ಎದುರು ಮಾತಾಡಿ ಮನಸ್ಸು ನೋಯಿಸುವುದು ಬೇಡವೆಂದು ಅದಕ್ಕೂ ಒಪ್ಪಿಗೆ ನೀಡಿದಳು. 
ಮಗನ ಇಚ್ಛೆಯಂತೆ ಅದೇ ಹುಡುಗಿ‌ ಜತೆ ಮದುವೆ ನಡೆಯಿತು.💑

ಮೊದ ಮೊದಲು ಸರಿಯಾಗೇ ಇದ್ದ ಸೊಸೆ ಸ್ವಲ್ಪದಿನ ಕಳೆದಂತೆ ಬೇರೆ ಮನೆ ಮಾಡುವಂತೆ ತನ್ನ ಗಂಡನನ್ನು ದಿನವೂ ಪೀಡಿಸುತ್ತಿದ್ದಳು.
ಈಗಂತು ಕೈಯಲ್ಲೊಂದಷ್ಟು ಹಣವೂ ಇತ್ತು.
ಪತ್ನಿಯ ಇಷ್ಟದಂತೆ ಹೊಸ ಮನೆ ಮಾಡಿದ್ದೂ ಆಯಿತು.
ಈಗೀಗ ಸೊಸೆಗೆ ತನ್ನ ಒಕ್ಕಣ್ಣ ಅತ್ತೆ
ಗಂಡ ಹೆಂಡಿರ ನಡುವೆ ಇರುವುದು ಸರಿತೋರಲಿಲ್ಲ.
ಮತ್ತೆ ತನ್ನ ಗಂಡನ ತಲೆಗೆ ಹುಳಬಿಟ್ಟಳು.ಒಂದು ದಿನ ಮಗ ನೆಪವೊಂದನ್ನ ಹೇಳಿ ತಾಯಿಯ ವಾಸ್ತವ್ಯವನ್ನ ಹಳೇ ಮನೆಗೆ ವರ್ಗಾಯಿಸಿಬಿಟ್ಟ.

ಈಗಂತು ಆ ತಾಯಿ ಸಂಪೂರ್ಣ ಕುಸಿದೇ ಹೋದಳು.
ಮಗನ ಬೇಕುಬೇಡವನ್ನೆಲ್ಲಾ ಪೂರೈಸುವ ಬರದಲ್ಲಿ ನಯಾ ಪೈಸೆಯೂ ಕೂಡಿಟ್ಟಿರಲಿಲ್ಲ.
ಮೊದಮೊದಲು ಪ್ರತಿವಾರವೂ ಬಂದು ಒಂದಷ್ಟು ಹಣ ನೀಡಿ ಹೋಗುತಿದ್ದವ ಈಗೀಗ ಬರವುದೂ ಅಪರೂಪವಾಗಿಬಿಟ್ಟಿತು.

ಆ ತಾಯಿಗೆ ಒಂದು ಹೊತ್ತಿನ ಊಟಕ್ಕೂ ಮಗನ ಹಾದಿ ಕಾಯುವ ಸ್ಥಿತಿ ಬಂತು.

ಒಂದು ದಿನ ನೇರವಾಗಿ ಮಗನ ಮನೆಗೆ ಬಂದ ತಾಯಿಗೆ ಸೊಸೆಯ ಚುಚ್ಚು ಮಾತು ಅಪಮಾನವೇ ಬಹುಮಾನವಾಗಿತ್ತು. 

ಮನನೊಂದ ತಾಯಿ ಉಪವಾಸ ಸತ್ತರೂ ಚಿಂತೆಯಿಲ್ಲ ಮಗನ ಮನೆಗೆ ಮತ್ತೆಂದೂ ಕಾಲಿಡಲಾರೆ ಎಂದು ಮನಸ್ಸಿನಲ್ಲೇ ದೃಡ ಸಂಕಲ್ಪ ಮಾಡಿದಳು.

ನೇರವಾಗಿ ಮನಗೆ ಬಂದವಳೇ ವಿಪರೀತ ಜ್ವರದಿಂದ ಹಾಸಿಗೆ ಹಿಡಿದು ಬಿಟ್ಟಳು. ಮಗನಿಗೆ ಸೂಜಿಮೊನೆಯಷ್ಟು ನೋವಾಗಬಾರದೆಂದು ತನ್ನ ಹೃದಯದೊಳಗೆ ಕಾಪಾಡಿದ ತಾಯಿ ದಿನ ಕಳೆದಂತೆ ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿಗೆ ತಲುಪಿದಳು.

ಒಂದು ದಿನ ಆಫೀಸಿನಲ್ಲಿದ್ದ ಮಗನಿಗೆ 📞ಪೋನ್ ಕರೆಯೊಂದು ಬಂತು
“ನಿನ್ನ ತಾಯಿ ಇಂದು ಮುಂಜಾನೆ ತೀರಿ ಹೋದರು,🙉
ಚಿತೆಗೆ ಬೆಂಕಿ ಇಡುವುದಕ್ಕಾದರೂ ಬಾ” ಎಂದಷ್ಟೇ ಹೇಳಿ ಕರೆ ಕಟ್ಟ್ ಆಯಿತು.

ಸರಿ ಇದೂ ಆಗಲಿ ಮುಂದೆಂದೂ ಆ ಮುದುಕಿಯ ಕಿರಿಕಿರಿ ಇಲ್ಲವಲ್ಲಾ ಎಂದು ಎದ್ದು ನೇರವಾಗಿ ತಾಯಿಯ ಮನೆಗೆ ಹೋದ.

ಹೋಗಿ ತಾಯಿಯ ಶವ ನೋಡುತ್ತಾನೆ ಇವಳೇನಾ ನನ್ನ ಹೆತ್ತ ತಾಯಿ ಎಂಬ ಸ್ಥಿತಿಗೆ ತಲುಪಿತ್ತು ಆ ತಾಯಿಯ ದೇಹ.

ಶವದ ಕಣ್ಣಂಚಲ್ಲಿ ಇನ್ನೂ ನೀರಿತ್ತು.
ಸರಿ ಶವ-ಸಂಸ್ಕಾರ ಮುಗಿಸಿ ಮನೆಗೆ ಹೊರಟು ನಿಂತ ಮಗನಿಗೆ ನೆರೆಮನೆಯಾತ ಒಂದು✉ ಕಾಗದವನ್ನು ಕೈಗಿಟ್ಟು ಹೋದ.

ಕಾಗದ ತೆಗೆದು ನೋಡಿದ ಮಗನಿಗೆ ನೂರು ಸಿಡಿಲು ಒಂದೇ ಕ್ಷಣ ಬಡಿದಂತ ಅನುಭವವಾಯಿತು.

ಆ 📃ಕಾಗದದಲ್ಲಿ ಹೀಗೆ ಬರೆದಿತ್ತು.
“ಮಗನೇ ನಾನಿನ್ನು ಹೋಗುತ್ತೇನೆ
ಆದರೆ!! ನನ್ನ ಒಂದು ಕಣ್ಣು ಏನಾಯಿತು? ಎಂದು ಚಿಕ್ಕವನಿದ್ದಾಗ ನೀನು ಕೇಳುತ್ತಿದ್ದೆ. ಆದರೆ ಇನ್ನೂ ಚಿಕ್ಕ ಮಗುವಾಗಿದ್ದ ನಿನ್ನ ಮನಸ್ಸು ನೋಯಿಸಬಾರದೆಂದು ಏನೇನೋ ಸುಳ್ಳು ಹೇಳುತ್ತಿದ್ದೆ.
ಇಂದು ನೀನೂ ಬೆಳೆದು ದೊಡ್ಡವನಾಗಿದ್ದೀಯ.
ಸತ್ಯ ನಿನಗೂ ತಿಳಿಯಲಿ.
ನೀನು ಚಿಕ್ಕವನಿರುವಾಗ, ಆಟವಾಡುವಾಗ ಕೋಲೊಂದು ತಾಗಿ ನಿನ್ನ ಕಣ್ಣು ಹೋಗಿತ್ತು.
ನನಗೆ ಇನ್ನು ಆಗಬೇಕಿರುವುದಾದರೂ ಏನು
ತನ್ನ ಮಗನ ಜೀವನ ಹಾಳಾಗಬಾರದೆಂದು ನನ್ನ ಒಂದು ಕಣ್ಣನ್ನ ನಿನಗೆ ನೀಡಿದ್ದೆ.
ಇಂದು ನಿನಗೆ ಈ ಒಕ್ಕಣ್ಣ ತಾಯಿ ಬೇಡವಾದ್ಲು, ಪರವಾಗಿಲ್ಲ ಮಗು.
ಆದರೆ ನನ್ನದೊಂದು ಪುಟ್ಟ ಕೋರಿಕೆಯಿದೆ.
ನನ್ನ ಆ ಕಣ್ಣಿನಲ್ಲಿ ಎಂದಿಗೂ ನೀರು ಬರಬಾರದು." ಎಂದು ಬರೆದಿತ್ತು.


ಆಗ ಮಗನಿಗೆ ಅರಿಯದಂತೆ ಕಣ್ಣಲ್ಲಿ ಧಾರಾಕಾರವಾಗಿ ನೀರಿಳಿಯಿತು. ಧಗಧಗನೆ ಉರಿಯುವ ತಾಯಿಯ‌ ಚಿತೆಯನ್ನೇ ನೋಡುತ್ತಾ ನಿಂತ ಮಗನಿಗೆ ತಾಯಿಯ‌ ಕಾಲಕೆಳಗೆ ಬಿದ್ದು ಅಳಬೇಕೆನಿಸಿತು.

ಆದರೆ ಕಾಲ ಮೀರಿತ್ತು.
ಆ ಮಹಾದಾನಿ ತಾಯಿ ಈ ಭೂಮಿಯಿಂದ ಬಹುದೂರ ಸಾಗಿ ಗಗನದಲ್ಲಿ ಮಿನುಗುವ ತಾರೆಯಂತೆ ಹೊಳೆಯುತಿದ್ದಾಳೆ.

ಆತ್ಮೀಯ ಮಿತ್ರರೇ ತಾಯಿ ಎಂಬ ಎರಡು ಪದದಲ್ಲಿ ಅಸಾಧ್ಯವಾದ ತ್ಯಾಗವಿದೆ, ನೋವಿದೆ.

ಮಕ್ಕಳ ಏಳಿಗಾಗಿ ಒಬ್ಬ ತಾಯಿ ಏನೆಲ್ಲಾ ತ್ಯಾಗ ಮಾಡಬಹುದೆಂದು ಒಂದು ಚಿಕ್ಕ ಕಥೆಯ ಮೂಲಕ ವಿವರಿಸುವುದು ಅಸಾಧ್ಯ. ಆಕೆಯ ತ್ಯಾಗದ ವಣ೯ನೆಗೆ ಪದಪುಂಜಗಳು ಸಾಲಲಾರವು. ತಾಯಿಯೆಂದರೆ
ಅದು ದೇವರ ಪ್ರತಿರೂಪ ಅಲ್ಲವೇ..?

ಎಸ್.ಆರ್.ವಲ್ಡ್೯ ಹೇಳುವಂತೆ
'ಹತ್ತು-ದೇವ'ರಿಗಿಂತ
'ಹೆತ್ತ-ತಾಯಿ' ಶ್ರೇಷ್ಠ .
'ಹೆತ್ತ-ತಾಯಿ'ಯನ್ನು
'ಸತ್ತ -ನಾಯಿ'ಯಂತೆ ನಡೆಸಿಕೊಂಡು
ಎಲ್ಲಾ ಮುಗಿದ ಮೇಲೆ
'ಅತ್ತು-ಬಾಯಿ'ಬಡೆದುಕೊಂಡರೆ,
'ಹತ್ತು-ದೇವತೆ'ಗಳೂ ಕ್ಷಮಿಸಲಾರವು.
 
'ಹೆತ್ತ' ತಾಯಿ
'ಸತ್ತು' ಹೋದ ಮೇಲೆ
'ಅತ್ತ'ರೇನು?
ಅವಳು ಬದುಕಿದ್ದಾಗಲೇ
'ಬತ್ತ'ದಿರಲಿ
ಅವಳ ಮೇಲಿನ ನಿಮ್ಮ ಪ್ರೀತಿಯ ಭಾವನೆ.
********************************************************************************
2.
* ಆಳಾಗಿ ದುಡಿ, ಹಾಳಾಗಿ ಹೋಗು
* ಕೈ ಕೆಸರಾದರೆ ನಾನೇನು ಮಾಡಲಿ?
* ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು
* ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ
* ಆಕಳು ಕಪ್ಪಾದರೆ ಸಗಣಿನೂ ಕಪ್ಪೇ.
* ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ
* ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು
* ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?
* ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.
* ಹಣ್ತಿಂದವ ತಪ್ಪಿಸಿಕೊಂಡ, ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ
* ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..
* ಗೆಳೆಯರ ಜಗಳ ಗುಂಡು ಹಾಕುವ ತನಕ..
* ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..

3.ಗಾದೆಗಳು .......
1)ಊಟ ಬಲ್ಲವನಿಗೆ ರೊಗವಿಲ್ಲ , ಮೊಬೈಲ ಇಲ್ಲದವನಿಗೆ ಮರ್ಯದೆ ಇಲ್ಲಾ . 
2) ಕೋಟಿ ವಿದ್ಯೆಗಿಂತ , ಚಾಟಿಂಗ ವಿದ್ಯೆ ಮೆಲು. 
3)ದುಡ್ಡೆ ದೊಡ್ದಪ್ಪಾ , ಮೊಬೈಲ ಅದರಪ್ಪಾ.
4) ಸತ್ತ್ಯಕ್ಕೆ ಸಾವಿಲ್ಲ , ಮೊಬೈಲ ಕ್ರೇಜಗೆ ಕೊನೆ ಇಲ್ಲ.
5) ಇಂದಿನ ಮಕ್ಕಳೆ ಮುಂದಿನ ಇಂಟರ್ನೆಟ್ ಸರದಾರರು.
6) ಊರಿಗೆ ಬಂದವನು ಮೊಬೈಲ ತರದೇ ಇರುವನೇ.
7) ಮೊಬೈಲೇ ಮಕ್ಕಳ ಮೊದಲ ಶಾಲೆ.
8) ಅಡಿಕೆಗೆ ಹೋದ ಮಾನ ಇಂಟರ್ನೆಟ್ ಹಾಕಿದರು ಬಾರದು. 
9) ಟೈಪಿಂಗ್ ಕಲಿತ ನಾರಿ ಫೆಸ್ಬುಕ್ ಅಲ್ಲಿ ಪರಾರಿ.
10) ನುಡಿದಂತೆ ನಡೆ , ಮೊಬೈಲ್ನೊಂದಿಗೆ ಯಮನ ಕಡೆ.
********************************************************************************

 4.*ಜಾಣ ಜಾಣೆಯರಿಗೆ ಸವಾಲು. *ಣೆ* *ಅಕ್ಷರದಿಂದ ಕೊನೆಯಾಗುವ ಪದಗಳನ್ನು ಬರೆಯಿರಿ.ಉ:ಆರೋಗ್ಯ ಪರಿಶೀಲನೆ= ತಪಾಸಣೆ*

೧.ದೇವರನ್ನು ನೆನೆಯುವುದು
೨.ಕುಳಿತುಕೊಳ್ಳುವ ಹಲಗೆ
೩.ಕಷ್ಟ ಪಡುವಿಕೆ
೪.ಉಪವಾಸದ ನಂತರ ಮಾಡುವುದು
೫.ಸಾಮಾಗ್ರಿಗಳು
೬.ದಯೆ
೭.ಹಾಸಿಗೆಯಲ್ಲಿ ಕಚ್ಚುವ ಕೀಟ
೮.ಹೊಲದಲ್ಲಿ ಕಲ್ಲು ಹೊಡೆಯಲು ಬಳಸುವುದು
೯.ಮದುವೆಯಲ್ಲಿ ವಧುವರ ಆಡುವ ಆಟ
೧೦.ಎಲ್ಲರಿಗೂ ಊಟ ಹಾಕುವುದು
೧೧.ಮಾತುಕತೆ
೧೨.ಡಿಕ್ಕಿ ಹೊಡೆಯುವುದು
೧೩.ತೀರ್ಥ ಸಿಂಪಡಿಸುವುದು
೧೪.ಕೊಠಡಿ
೧೫.ಚತುರೆ
೧೬.ನಿರ್ವಹಿಸುವುದು
೧೭.ತೀರ್ಥ ಕೊಡುವ ಚಮಚ
೧೮.ಜವಾಬ್ದಾರಿ
೧೯.ದೇವರಿಗೆ ಸುತ್ತುವುದು.
೨೦.ಮುಷ್ಕರದಲ್ಲಿ ಕೂಗುವುದು.

***********************************************************************
 UTTARA:
 ೧.ಸ್ಮರಣೆ
೨.ಮಣೆ
೩.ಬವಣೆ
೪.ಪಾರಣೆ
೫.ಸಲಕರಣೆ
೬.ಕರುಣೆ
೭.ತಿಗಣೆ
೮.ಕವಣೆ
೯.ಉರುಟಣೆ
೧೦.ಸಮಾರಾಧನೆ
೧೧.ಸಂಭಾಷಣೆ
೧೨.ಘರ್ಷಣೆ
೧೩.ಪ್ರೋಕ್ಷಣೆ
೧೪.ಕೋಣೆ
೧೫.ಜಾಣೆ
೧೬.ನಿರ್ವಹಣೆ
೧೭.ಉದ್ಧರಣೆ
೧೮.ಹೊಣೆ
೧೯.ಪ್ರದಕ್ಷಿಣೆ
೨೦.ಘೋಷಣೆ
*********************************************************************************

5.*ಅಳಬೇಡ ತಂಗಿ ಅಳಬೇಡ*

ಸಾಹಿತ್ಯ: ಶಿಶುನಾಳ ಶರೀಫರು
ಗಾಯನ: ಶಿವಮೊಗ್ಗ ಸುಬ್ಬಣ್ಣ

ಹಾಡು ಹುಟ್ಟಿದ ಸಮಯ: 
ಶರೀಫರು ಒಮ್ಮೆ ಊರಿನಲ್ಲಿ ನಡೆದು ಹೋಗುತ್ತಿದ್ದಾಗ, ಅದೇ ಮದುವೆಯಾದ ಹುಡುಗಿಯನ್ನು ಗಂಡನ ಮನೆಗೆ ಕಳಸಿ ಕೊಡುತ್ತಿರುವ ನೋಟವನ್ನು ನೋಡಿದರು. ಶರೀಫರ ಕಾಲದಲ್ಲಿ ಬಾಲ್ಯವಿವಾಹಗಳೇ ನಡೆಯುತ್ತಿದ್ದವು. ಹೀಗಾಗಿ, ಗಂಡನ ಮನೆಗೆ ಹೋಗುತ್ತಿರುವ ಹುಡುಗಿ ಅಳುವದು ಸಾಮಾನ್ಯ ದೃಶ್ಯವಾಗಿತ್ತು.ಆಗ ಶರೀಫರ ಬಾಯಿಂದ ಹೊರಹೊಮ್ಮಿದ ಹಾಡು.
ಶರೀಫರು ಹೇಳುವುದು, ವಿವಾಹ ಮಾಯೆಯ ಮರ; ಮಾಯೆಯ ಬಳಗ (ಮಿಂಡೇರ ಬಳಗವು) ಅದರ ಜೊತೆಯಲ್ಲಿ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸುವ ಕಾಯಕದ ಮುಂದಿನ ಜೀವನ; ೮-೯ ವರ್ಷದ ಹೆಣ್ನು ಮಗು ಗಂಡನ ಮನೆಗೆ ನೂಕುತ್ತಿದ್ದಾರೆ-ಎಷ್ಟು ಅತ್ತರೂ ಉಳುಹಿಕೊಂಬುವರಿಲ್ಲ; ಮುಂದೆ ಪ್ರಾಪಂಚಿಕ ಸುಖ ಇದೆ. ನಿನಗೆ ಸಂಸಾರದಿಂದ ಬಿಡುಗಡೆ ಇಲ್ಲ. ಹಾಗಾಗಿ ವಿರಾಗಿ ಶರೀಫರ ಮಾತು, 'ಶಿಶುನಾಳಧೀಶನ ಅಂಗಳಕ ನೀ ಹೊರತಾದೆವ್ವ ಗೌರಿ'.
🌷🌷🌷🌷🌷🌷🌷🌷


ಅಳಬೇಡ ತಂಗಿ ಅಳಬೇಡ
ಅಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬವರಿಲ್ಲ

ಖಡಿಕೀಲೆ ಉಡಿಯಕ್ಕಿ ಹಾಕಿದರವ್ವಾ
ಒಳ್ಳೆ ದುಡುಕೀಲೆ ಮುಂದಕ್ಕೆ ನೂಕಿದರವ್ವಾ
ಮಿಡಿಕ್ಯಾಡಿ ಮದುವ್ಯಾದಿ ಮೋಜು ಕಾಣವ್ವ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ

ರಂಗೀಲಿ ಉಟ್ಟೀದಿ ರೇಶ್ಮಿ ಧಡಿ ಸೀರಿ
ಹಂಗನೂಲಿನ ಪರವಿ ಮರತವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತು ಆದೆವ್ವ ಗೌರಿ
🌼🌿🌼🌿🌼🌿🌼🌿🌼🌿

6.ಅನುಸಂಧಾನ: ಕೃಷ್ಣ ಭಟ್ ಅಳದಂಗಡಿ
ಶ್ರೀ ವಾದಿರಾಜರು ಲಕ್ಷ್ಮೀ ಶೋಭಾನೆ ರಚಿಸಿದ  ಸಂದರ್ಭ 🌹🌹

ಶ್ರೀ  ವಾದಿರಾಜ  ಸ್ವಾಮಿಗಳು  ದೇಶ ಸಂಚಾರ ಮಾಡುತ್ತ ಕರುನಾಡಿನ ಒಂದು ಹಳ್ಳಿಗೇ ಬಂದರು...ಅಲ್ಲಿರುವ  ಒಂದು ಗುಡಿಯಲ್ಲಿ  ತಂಗಿದ್ದು ಪೂಜೆ, ಪಾಠ  ಪ್ರವಚನ  ನಡೆಸುತ್ತಿದ್ದರು...

ಆ ಊರಿನ ಜಮೀನ್ದಾರ  ಅರಸಪ್ಪ  ನಾಯಕ  ಎಂಬುವರ ಮನೆಯಲ್ಲಿ  ಮಗಳ ಮದುವೆ ಇತ್ತು ...ಮಗಳ ಮದುವೆ ಅತ್ಯಂತ  ವೈಭವದಿಂದ  ನಡೆಯುತ್ತಿತ್ತು.

ಅಂದು ಸಂಜೆ ಮದುವೆ ದಿಬ್ಬಣ  ಬಂತು . ಎಲ್ಲರೂ ಸಂಭ್ರಮದಿಂದ ವರನನ್ನು ಎದುರುಗೊಳ್ಳಲು  ತೆರಳಿದರು ..ಜೋರಾದ ಶಹನಾಯಿ ವಾದನ, ಅನೇಕ ವಾದ್ಯಗಳ ಮೇಳ ...ಸಂತೋಷ ಸಂಭ್ರಮ  ಎಲ್ಲೆಲ್ಲೂ ಮನೆಮಾಡಿತ್ತು...

ಕುದುರೆಯ ಮೇಲೆ  ಆಸೀನನಾದ   ಸುಂದರ ವರ ತಲೆಗೆ  ರೇಶಿಮೆ ಪೇಟ,ರೇಷ್ಮೆ ವಸ್ತ್ರದಿಂದ ಅಲಂಕೃತನಾಗಿದ್ದ.

 ವರನಿಗೇ  ಇನ್ನೇನು ಕುಂಕುಮವಿಟ್ಟು ಹೂಮಾಲೆ  ಹಾಕಬೇಕು, ಎದುರುಗೊಳ್ಳಬೇಕು, ಎಂದು ಅರಸಪ್ಪ ನಾಯಕ ದಂಪತಿಗಳು ಮುಂದೇ  ಬರುವಷ್ಟರಲ್ಲೇ, ವರ
ದೊಪ್ಪನೆ  ನೆಲಕ್ಕೆ ಬಿದ್ದ...ಒಂದೆರಡು ಗಳಿಗೆ ಉಸಿರಾಡಿ ಉಸಿರಾಟ  ನಿಲ್ಲಿಸಿದ...ಅವನ ಮುಖ ನೀಲಿ  ವರ್ಣಕ್ಕೇ  ತಿರುಗಿತು ..

ಎಲ್ಲರ  ಮುಖದಲ್ಲಿ  ಗಾಬರಿ, ಆತಂಕ  ಶುರುವಾಯಿತು ...ವರನ ಅಕ್ಕ ಪಕ್ಕ ಗಮನ ಹರಿಸಲಾಗಿ ಒಂದು ನಾಗರಹಾವು ಹರಿದುಹೋಗಿದ್ದು ತಿಳಿಯಿತು ..

ಅರಸಪ್ಪ ನಾಯಕರಿಗೆ ದಿಕ್ಕೇ ತೋಚದಂತಾಯಿತು ..ಆಲ್ಲಿ ಮದುವೆ ನಡೆಸಿ ಕೊಡಲು ಬಂದಿದ್ದ ಅರ್ಚಕರು ವಾದಿರಾಜ ಸ್ವಾಮೀಜಿಗಳು ಊರಿಗೆ  ಬಂದಿದ್ದನ್ನು ನೆನಪಿಸಿದರು ..
ನಾಯಕರಿಗೆ ಹೋದ ಜೀವ ಮತ್ತೇ  ಮರಳಿ ಬಂದಂತಾಯ್ತು ...

ಕೂಡಲೇ ಕೆಲವು ಬಂಧುಜನರೋಂದಿಗೇ  ಸ್ವಾಮೀಜಿಗಳನ್ನು ಭೇಟಿ ಮಾಡಿ  ಆದ ಅವಘಡದ ಬಗ್ಗೆ ಹೇಳಿ, ಹೇಗಾದರೂ ದಾರಿ ತೋರಿಸಿ,  ಅಂತ ಕಣ್ಣೀರಿಟ್ಟರು ..

ವಾದಿರಾಜರು ಅವ್ರಿಗೆ ಸಮಾಧಾನ ಹೇಳೀ ಧ್ಯಾನಕ್ಕೆ  ಕುಳಿತರು ..ಅವರ   ಶೇಷಶಾಯಿಯಾದ ಶ್ರೀ ವಿಷ್ಣು  ಮತ್ತು ಲಕ್ಷ್ಮೀಯ ಮದುವೆಯ ಚಿತ್ರಣ ಕಣ್ಣಿಗೆ ಕಟ್ಟಿತು ...

ಸಂತಸದಿಂದ ಲಕ್ಷ್ಮೀ ಶೋಭಾನೇ ಬರೆಯತೊಡಗಿದರು ..ಬಹಳ ಕಾಲ ಶ್ರೀಹಯವದನನ್ನು ಮನದಲ್ಲೀ ಧ್ಯಾನಿಸಿ, ಅವನನ್ನು ಪ್ರಸನ್ನಗೊಳಿಸಿ, ವರನನ್ನು ಬದುಕಿಸಿ ನಾಯಕರನ್ನು  ಅನುಗ್ರಹಿಸಬೇಕೇಂದು  ಪರಿ ಪರಿಯಾಗಿ ಪ್ರಾರ್ಥಿಸಿದರು  ..

ಕೊನೆಗೆ ಇವರ ಆಗಾಧ ಭಕ್ತಿಗೆ ಒಲಿದ ಶ್ರೀ ಹಯವದನ, ವರನನ್ನೂ ಬದುಕಿಸಿ ಅನುಗ್ರಹಿಸಿದ..

ಹೀಗೇ  ಮದುವೆಯ ಮನೇಯಲ್ಲೀ ಆದ ಅವಾಂತರವನ್ನು ತೊಲಗಿಸಿ ಸಂತೋಷ  ತುಳುಕುವಂತೆ  ಮಾಡಿದರು ಶ್ರೀ ವಾದಿರಾಜರು...

ಇಂದಿಗೂ ಈ  ಹಾಡನ್ನು ಮದುವೆಯ  ಮನೇಯಲ್ಲಿ  ಹಾಡುವ ಸಂಪ್ರದಾಯವಿದೆ...ಅದಕ್ಕೆ  ಕಾರಣ ಈ  ನುಡಿ ..



ಮದುವೆಯ ಮನೇಯಲ್ಲೀ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು 
ವಧುಗಳಿಗೆ ಒಲೆ ಭಾಗ್ಯ ದಿನ ದಿನಕೇ ಹೆಚ್ಚುವುದು ಮದನನಯ್ಯ ಕೃಪೆಯಿಂದ ll ಶೋಭಾನೆ ll
✍🏼 ರುಕ್ಮಿಣಿ  ವಿಠ್ಠಲಗೇ  ಸಮರ್ಪಣೇ 
*********************************************************************
7.ಜಾಣ , ಜಾಣೆಯರಿಗೆ ಮತ್ತೊಂದು ಸವಾಲು...
ಈ ಪದಗಳನ್ನು ಹುಡುಕಿ, ಮೂರು ಅಕ್ಷರಗಳು, "ಗೆ" ಅಕ್ಷರದಿಂದ ಕೊನೆ.

1. ಹಪ್ಪಳದ ಜೊತೆಗಿರುವುದು
2. ಊಟಕ್ಕೆ ಮಾಡುವುದು
3. ಕಣ್ಣಿಗೆ ಹಚ್ಚುವುದು
4. ಚೊಂಬಿನ ಜೊತೆ ಇರುವುದು
5. ಕೋತಿಯ ಕೈಗೆ ಕೊಡುವ ಹೂವು
6. ಮೈಸೂರಿನ ಹೂವು
7. ಕಾಲಿನ ಗೆಜ್ಜೆ
8. ಮನೆ ಕಟ್ಟಲು ಬೇಕು
9. ಸಂದೂಕು
10.  ಮಡಿದವರ ಪೂಜಾ ಸ್ಥಳ
11. ರವೆಯ ಸಿಹಿ ತಿನಿಸು
12. ಮೊಸರಿಂದ ಆಗುವುದು
13. ಮರದ ತುಂಡುಗಳು
14. ಯುಗಾದಿಯ ಸಿಹಿ
15. ಈಗಿನ ಮಾಲ್
16. ತರಕಾರಿ ಕತ್ತರಿಸುವ ಮಣೆ
17. ಮೇಲೆ ಅಲ್ಲ
18. ಸೀರೆಯಲ್ಲಿ ತೆಗೆಯುವುದು
19. ಒತ್ತಿ ಮಾಡುವ ತಿಂಡಿ
20. ನಡಿಗೆಗೆ ಬದಲಿ ಮಾರ್ಗ
***************************************************************************

8.*ವಯಸ್ಸಾದ ಅಜ್ಜಿಯನ್ನು ಯಾರೋ ಕೇಳಿದರಂತೆ, ರಂಗೋಲಿ ಹಾಕುವುದು ಏಕೆ? ಎಂದಾಗ ಒಂದು ಕತೆಯನ್ನೇ ಹೇಳುತ್ತಾರೆ. ಆ ಕತೆ ಏನು ಗೊತ್ತೆ.*

ಆಯುಷ್ಯ ಮುಗಿದೊ ಡನೆ ಜೀವಾತ್ಮವನ್ನು ಕರೆದೊಯ್ಯಲು ಭೂಮಿಗೆ ಬರುವ ಯಮಧರ್ಮರಾಜ, ಒಮ್ಮೆ ಪತಿವ್ರತೆಯೊಬ್ಬಳ ಪತಿಯ ಪ್ರಾಣವನ್ನು ಕೊಂಡೊಯ್ಯಲು ಸೂರ್ಯ ಹುಟ್ಟುವ ವೇಳೆಗೇ ಪ್ರತ್ಯಕ್ಷನಾದನಂತೆ. ಅಷ್ಟೊತ್ತಿಗಾಗಲೇ, ಸ್ನಾನ ಮಾಡಿ, ಮನೆಯ ಮುಂದೆ ಕಸ ಗುಡಿಸಿ, ಸಾರಿಸಿ ಸುಂದರವಾಗಿ ರಂಗೋಲಿ ಇಟ್ಟಿದ್ದ ಸಾಧ್ವಿಯ ಕಂಡು ಕಠೋರ ಹೃದಯದ ಯಮನ ಹೃದಯವೂ ಕರಗಿತಂತೆ. ಆಕೆ ಮನೆಯ ಮುಂದೆ ಹಾಕಿದ್ದ ಆ ರಂಗೋಲಿ ಯಮನನ್ನೂ ಆಕರ್ಷಿಸಿತ್ತಂತೆ.

ರಂಗೋಲಿಯ ಕಂಡು ಪ್ರಸನ್ನನಾದ ಯಮದೇವ “ವತ್ಸೆ ನಾನು ನಿನ್ನ ಪತಿಯ ಪ್ರಾಣ ಕೊಂಡೊಯ್ಯಲೆಂದೇ ಬಂದಿದ್ದೆ. ನಿನ್ನ ಈ ಸುಂದರ ರಂಗೋಲಿ ನನ್ನನ್ನು ಆಕರ್ಷಿಸಿದೆ.“ ಸೂರ್ಯೋದಯಕ್ಕೆ ಮೊದಲೇ ಎದ್ದು ಮನೆಯ ಮುಂದೆ ರಂಗೋಲಿ ಹಾಕುವ ಮನೆಯನ್ನು ನಾನು ಪ್ರವೇಶಿಸುವುದಿಲ್ಲ ಎಂದು ಆಕೆಗೆ ವರ ಇತ್ತನಂತೆ. ಅದಕ್ಕೇ ಅಂದಿನಿಂದ ಇಂದಿನ ವರೆಗೆ ಭಾರತ ನಾರಿಯರು ಸೂರ್ಯೋದಯಕ್ಕೆ ಮೊದಲೇ ಎದ್ದು, ಮನೆಯ ಮುಂದೆ ರಂಗೋಲಿ ಹಾಕುತ್ತಾರಂತೆ.
ಕಣ್ಣಾ ಮುಚ್ಚಾಲೆ ಹಾಡಿಗೆ ಅರ್ಥ. 

9) SANKSHIPTHA RAMAYANA:
"ಕಣ್ಣಾ ಮುಚ್ಚೇ....*
 *ಕಾಡೇ ಗೂಡೇ....*
 *ಉದ್ದಿನ ಮೂಟೆ....*
*ಉರುಳೇ ಹೋಯ್ತು....*
*ನಮ್ಮಯ ಹಕ್ಕಿ ...*
*ನಿಮ್ಮಯ ಹಕ್ಕಿ ....*
*ಬಿಟ್ಟೇ ಬಿಟ್ಟೆ ... "*

*ಇದೊಂದು ಮಕ್ಕಳ ಆಟ*
*ನಮ್ಮ ಹಿಂದಿನವರು ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು ಎನ್ನುವುದಕ್ಕೆ ಇದೊಂದು ನಿದರ್ಶನ.*

*"ಕಣ್ಣಾ ಮುಚ್ಚೆ " -*
*ಅಂದರೆ ಅಯೋಧ್ಯೆಯ ಮಹಾರಾಜ "ದಶರಥ" ಕಣ್ಣು ಮುಚ್ಚಲು....* 
*"ಕಾಡೇ ಗೂಡೆ "-*
 *ಶ್ರೀರಾಮಚಂದ್ರನಿಗೆ ಕಾಡೇ ಮನೆಯಾಯಿತು...*
*"ಉದ್ದಿನಮೂಟೆ" -*
*ಅಹಂಕಾರದಿಂದ ಉದ್ದಿನ ಬೇಳೆಯಂತೆ (ಮೂಟೆಯಂತೆ) ಉಬ್ಬಿಹೋಗಿದ್ದ ರಾವಣನನ್ನು ...*
*"ಉರುಳೇ ಹೋಯ್ತು" -*
*ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ.... ಅದೆ ಸೊಕ್ಕಿನ ಮೂಟೆ, ಅದೇ ಉದ್ದಿನ ಮೂಟೆ ಉರುಳೇ ಹೋಯ್ತು....*
*"ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ "....*
*ಸಾತ್ವಿಕನಾದ ವಿಭೀಷಣ  (ರಾವಣನ ತಮ್ಮ ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ...*
*ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ* , *ನಿಮ್ಮಯ ಹಕ್ಕಿ*
*ಬಿಟ್ಟು ಕಳಿಸಿಕೊಡುತ್ತಿದ್ದೇವೆ,* *ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ...*
*ಈ ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಈ ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು....**
*ಹೀಗಿದೆ ನೋಡಿ ಅರ್ಥ ಈ "ಕಣ್ಣಾಮುಚ್ಚಾಲೆ"


9)LIFES MEMORABLE MOMENTS:
ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು: ಮಧ್ಯವಯಸ್ಸಿನ ನಂತರ 
.ಜೀವನದ ರಹಸ್ಯ
   ಮಧ್ಯವಯಸ್ಸಿನ ವರೆಗೆ :   ಹೆದರ  ಬೇಡಿ.
   ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ
.ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ
೩.ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವ ವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.
೪.ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.
.ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ
.ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.
೭.ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.
.ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ,ಬೇಸರ  ಬೇಡ.ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗ ಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.
.ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.
೧೦.ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .
೧೧.ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ.   ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವದು ಬೇಡ
೧೨.ಹಳೆಯ ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ    
          ೧.ನಿಮ್ಮ ಹಳೆಯ ದೇಹ : ನಿಮ್ಮ ಆರೋಗ್ಯ ಮತ್ತು     ದೇಹಸ್ಥಿತಿಯ ಬಗೆಗೆ ಜಾಸ್ತಿ ಕಾಳಜಿ ನಿಮ್ಮದೇ ಇರಲಿ  
         .ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು.  
         .ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ) 
         ೪.ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.
೧೨.ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ  ಮತ್ತು ನಗುತ್ತಿರಿ 
೧೩.ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು,ಅಂತೆಯೇ ನಮ್ಮ ಜೀವನ, ಅದಕ್ಕೇ ಸಂತಸವಾಗಿಸಿರಿ.
೧೪.ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.
**************************************************************************************
10.*"ಕಾಲಿನ ಮೇಲೆ ಕಾಲು ಹಾಕಿ ಕೂರುವುದಲ್ಲ ದೊಡ್ಡಸ್ತಿಕೆ,ತನ್ನ ಕಾಲ ಮೇಲೆ ನಿಂತು ಬೇರೆಯವರ ಕೈ ಹಿಡಿದು ಅವರಿಗೂ ನಿಲ್ಲಲು ಕಲಿಸುವುದು ನಿಜವಾದ ದೊಡ್ಡಸ್ತಿಕೆ..,"*
*ಮನಸ್ಸಲ್ಲಿ ಇರೋ ಅಹಂಕಾರ ಕಣ್ಣಿನಲ್ಲಿ ಬಿದ್ದು ಧೂಳಿನಂತೆ.ಅದನ್ನು ಸ್ವಚ್ಛ ಗೊಳಿಸದಿದ್ದರೆ ನಾವು ನೋಡುವ ಪ್ರತಿ ಒಂದು ವಸ್ತು ಕೂಡ ಅಶುದ್ಧವಾಗಿ ಕಾಣಿಸುತ್ತದೆ..."*
*ಮನುಷ್ಯ ಎಷ್ಟೇ ಕೆಂಪಗಿದ್ದರೂ ಅವನ ನೆರಳು ಕಪ್ಪಗೆ ಇರುತ್ತದೆ.*
*ನಾನು ಶ್ರೇಷ್ಟ ಅನ್ನುವುದು ಆತ್ಮವಿಶ್ವಾಸ*
*ನಾನೇ ಶ್ರೇಷ್ಟ ಎನ್ನುವುದು ಅಹಂಕಾರ*
" *ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ* *ಅರ್ಪಿಸುತ್ತಾರೆ, ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ*........, 
" *ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ*.......
*ಕಳೆದು ಕೊಂಡ ಜಾಗದಲ್ಲಿ ಹುಡಕಬೇಕು .   ಸೋತ ಜಾಗದಲ್ಲೆ ಗೆಲ್ಲಬೇಕು#ಅವಮಾನಿಸಿದ ಜಾಗದಲ್ಲೆ ಬೆಳೆಯಬೇಕು#ತಿರಸ್ಕರಿಸಿದವರಿಂದಲೇ ಪುರಸ್ಕರಿಸಿ ಕೊಳ್ಳಬೇಕು#*
*ಯಾರು "ಜವಾಬ್ದಾರಿ" ತೆಗೆದುಕೊಳ್ಳಲು ತಯಾರಾಗಿರುತ್ತಾರೋ, ಅವರಿಗೆ ಮಾತ್ರ "ತೊಂದರೆಗಳು " ಬರುತ್ತವೆ.*
*ಹಾಗೆಯೇ ಜವಾಬ್ದಾರಿ ತೆಗೆದುಕೊಂಡವರು ಯಾವಾಗಲೂ ಸೋಲುವದಿಲ್ಲ " ಗೆಲ್ಲುತ್ತಾರೆ " ಮತ್ತು ಹೊಸದನ್ನು "ಕಲಿಯುತ್ತಾರೆ".*
*"ತಿರಸ್ಕಾರದಿಂದ ಕಾಣುವ ಗೆಳೆಯರಿಗೋಸ್ಕರ ಅಳುತ್ತಾ ಕುಳಿತುಕೊಳ್ಳಬೇಡಿ.. ಬದಲಾಗಿ ನಗುತ್ತ ಅವರಿಗೊಂದು ಥ್ಯಾಂಕ್ಸ್ ಹೇಳಿ ಏಕೆಂದರೆ ಅವರಿಗಿಂತ ಉತ್ತಮ ಗೆಳೆಯರ ಹುಡುಕಾಟಕ್ಕೆ ಅವಕಾಶ ನೀಡಿದ್ದಕ್ಕಾಗಿ"...!*
*ಈ ಜಗತ್ತಿನಲ್ಲಿ ಆಸ್ತಿವಂತರು ಬಹಳಷ್ಟು*
*ಜನರಿದ್ದಾರೆ ಆಸ್ತಿವಂತರ ಹಿಂದೆ ಹೋಗದೇ* 
*ಹೃದಯವಂತರ ಹಿಂದೆ ಹೋಗೋಣ*
*ಯಾಕೆಂದರೆ.......!* *ಆಸ್ತಿಗೆ ಬೆಲೆಕಟ್ಟಬಹುದು* 
*ಆದರೆ ಪ್ರೀತಿಸುವ ಹೃದಯಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ* 
                                                        
*"ಕಳೆದು ಹೋದ ಜೀವನವನ್ನು ಯಾವತ್ತೂ ನೆನಪಿಸಬೇಡಿ.ಹಣೆ ಬರಹದಲ್ಲಿ ಏನು ಬರೆದಿದೆಯೊ ಅದು ಆಗಲೆಬೇಕು.ನಿನ್ನೆಯ ನೋವು ನೆನಪು ಮಾಡಿದ್ರೆ ಇಂದಿನ ಅಮೂಲ್ಯವಾದ ದಿನದ ನಗು ಹಾಳು ಮಾಡುತ್ತೇ...."_*
*"ಗುರಿ ಮುಟ್ಟವ ನಿರ್ಧಾರಿಸಿರುವ ಮನಸ್ಸನ್ನು.ಇಳಿಜಾರಿನಲ್ಲಿ ಹರಿಯುವ ನೀರನ್ನು ಯಾರು ತಾನೇ ತಡೆಯಲು ಸಾಧ್ಯ...?*
*"ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ- ಕೆಲವೇ ನಿಮಿಷಗಳ ಕೆಲಸ....*
*"ಒಬ್ಬರನ್ನು ಸಂತೋಷ ಪಡಿಸುವುದೆಂದರೆ ಗಿಡವನ್ನು ನೆಟ್ಟು,ಮರವಾಗಿ ಬೆಳೆಸಿದಂತೆ- ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ....*  
*ನಾವು ಒಬ್ಬರಿಗೆ ಸಹಾಯ*  
 *ಮಾಡಿದರೆ ನಮಗೆ ದೇವರು*
 *ಸಹಾಯ ಮಾಡುತ್ತಾರೆ.ನಾವು*
 *ಸಮಾಜವನ್ನು ಬೆಳೆಸಿದರೆ*
 *ಸಮಾಜ ನಮ್ಮನ್ನು*  
 *ಬೆಳೆಸುತ್ತದೆ.*
*ಸಂಬಂಧವೆನ್ನುವುದು ಬಡವ ಬಲ್ಲಿದ ಲೆಕ್ಕಾಚಾರದ ಮೇಲಿರಬಾರದು.. ಕುಡಿಯಲು ಯೋಗ್ಯವಿಲ್ಲದ ನೀರು ಕೂಡ ಬೆಂಕಿಯನ್ನು ನಂದಿಸುತ್ತದೆ...*
*ಅರ್ಥಪೂರ್ಣ ;- "ಮನುಜ,*
*ಬೆಂಕಿ‌ ತಾ ಹುಟ್ಟಿದ ಸ್ಥಳವನ್ನೆ ತಾ ಸುಡುವಂತೆ ,,*
*ನಿನ್ನ ‌ಅಹಂಕಾರ ನಿನ್ನನ್ನೆ ನಾಶ ಮಾಡುತ್ತದೆ ..."*
*ವಿಚಿತ್ರ ಜಗತ್ತಿನಲ್ಲಿ ಬದುಕ್ತಿರೊದೆ ಗ್ರೇಟು.., ಅಂತದ್ರಲ್ಲಿ ನಾಲ್ಕು ಜನ ನಮ್ಮನ್ನು  ನೋಡಿ ಏನಂತಾರೆ ಅಂತ ಯೋಚನೆ ಮಾಡ್ಕೋಂಡು ಕುಂತಿದ್ರೆ....!*
*ಅದೇ ನಾಲ್ಕು ಜನ ಕೊನೆಗೆ ಹೇಳ್ತಾರೆ ಬೇಗ ಎತ್ತಿ ಟೈಮ್ ಆಗುತ್ತೆ ಅಂತ.*
*'ಸಾವು' ಬೆನ್ನಿಂದೆ ಇರೋದು ವಾಡಿಕೆ*
*'ಸಾಧನೆ' ಕಣ್ಮುಂದೆ ಬರ್ಬೆಕು ಅನ್ನೋದೇ ಬೇಡಿಕೆ...*
*ಸಾಧನೆ ಇಲ್ಲದೆ ಗೆಲುವೆ ಇಲ್ಲ *ಸಾಧಿಸಿದವನಿಗೆ ಸಾವೇ ಇಲ್ಲ*
****************************************************************************************************